ಸ್ನೇಹಿತರೆ ನಿಮ್ಮೆಲ್ಲರಿಗೂ ನಮಸ್ಕಾರಗಳು.
ನಿಮಗೆಲ್ಲಾ ತಿಳಿದಿರುವ ಹಾಗೆ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ 5 ಗ್ಯಾರಂಟಿಗಳನ್ನ ಘೋಷಿಸಿತ್ತು ನಾವು ಕರ್ನಾಟಕದಲ್ಲಿ ಗೆದ್ದರೆ ಈ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಹೇಳಿದ್ದರು.
ಈಗ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ತಿಂಗಳುಗಳೇ ಕಳೆದಿವೆ ಈಗ ಹೇಳಿರುವ ಐದು ಗ್ಯಾರಂಟಿಗಳನ್ನ ಕರ್ನಾಟಕದ ಜನತೆಗೆ ನೀಡಬೇಕಾದದ್ದು ಕಾಂಗ್ರೆಸ್ ನವರದ್ದು .
ಈಗ ಈ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ , ಹಾಗಾದ್ರೆ ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಅಷ್ಟೇ ಅಲ್ಲದೆ ಗೃಹಲಕ್ಷ್ಮಿ ಯೋಜನೆಗೆ ಯಾವಾಗನಿಂದ ಅರ್ಜಿ ಪ್ರಾರಂಭವಾಗುತ್ತದೆ ಮತ್ತು ಗೃಹಲಕ್ಷ್ಮಿ ಯಾವಾಗ ಬಿಡುಗಡೆಯಾಗಲಿದೆ ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು.
ಸಂಪೂರ್ಣ ವಿವರ ವನ್ನ ಈ ಲೇಖನದಲ್ಲಿ ನೀಡಲಿದ್ದೇನೆ ಹಾಗಾಗಿ ಈ ಲೇಖನವನ್ನ ಪೂರ್ಣವಾಗಿ ಓದಿ.
ಗೃಹಲಕ್ಷ್ಮಿ ಯೋಜನೆ 2023:
ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಮಹಿಳೆಯರಿ ಗಂತಲೇ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ 2000 ಹಣ ಬಂದು ಸೇರಲಿದೆ ಎಂದು ಪ್ರಚಾರ ಮಾಡಿದ್ದರು. ಈಗ ಈ ಗೃಹಲಕ್ಷ್ಮಿ ಯೋಜನೆಗೆ ಸುಮಾರು 1.20 ಕೋಟಿ ಮಹಿಳೆಯರಿಗೆ ಈ ಯೋಜನೆ ಸಿಗಲಿದೆ ಎಂದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ನಿತದೇ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಆಗಸ್ಟ್ 17ರಿಂದ ಮಹಿಳೆಯರ ಬ್ಯಾಂಕ್ ಖಾತೆಗೆ 2000 ಹಣ ನೇರವಾಗಿ ಬಂದು ಸೇರಲಿದೆ ಎಂದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಇದನ್ನು ಓದಿ:-ಕರ್ನಾಟಕದಲ್ಲಿ ಕರೆಂಟ್ ಫ್ರೀ ಆಗುತ್ತಿದ್ದಂತೆ ಇಡೀ ಭಾರತಕ್ಕೆ ಹೊಸ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾಗಿರುವ ಅರ್ಹತೆಗಳೇನು?
ಸ್ನೇಹಿತರೆ ನಿಮ್ಮ ಹತ್ತಿರ BPL ಹಾಗೂ APL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಗಳು ಇದ್ದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಒಂದು ವೇಳೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇಲ್ಲದಿದ್ದರೂ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರಲ್ಲ ?
ಸ್ನೇಹಿತರೆ ಇದು ಕೂಡ ಬಹು ದೊಡ್ಡ ಪ್ರಶ್ನೆ ಆಗಿರುತ್ತದೆ ನಿಮ್ಮ ಮನಸ್ಸಿನಲ್ಲಿ ನೋಡಿ ಮೊದಲನೇದಾಗಿ ಹೇಳಬೇಕೆಂದರೆ ನಿಮ್ಮ ಮನೆಯಲ್ಲಿ ನಿಮ್ಮ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಸರ್ಕಾರಿ ನೌಕರಿಯನ್ನ ಮಾಡುವಂತಿದ್ದರೆ ಅಥವಾ ನಿಮ್ಮ ಮಕ್ಕಳು ಸರ್ಕಾರಿ ನೌಕರಿಗೆ ಹೋಗುವಂತಿದ್ದರೆ ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ಯಾರಾದರೂ ಟ್ಯಾಕ್ಸ್ ಅನ್ನು ಕಟ್ಟುವಂತಿದ್ದರೆ ಅಥವಾ ನೀವೇ ಆಗಿರಬಹುದು ನಿಮ್ಮ ಮಕ್ಕಳೇ ಆಗಿರಬಹುದು ಸರಕಾರಕ್ಕೆ ಜಿಎಸ್ಟಿ ಅನ್ನು ಕಟ್ಟುವಂತಿದ್ದರೆ ಈ ಯೋಜನೆ ನಿಮಗೆ ಬರುವುದಿಲ್ಲ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು ?
ನಿಮ್ಮ ಆಧಾರ್ ಕಾರ್ಡ್
ನಿಮ್ಮ ಗಂಡನ ಆಧಾರ್ ಕಾರ್ಡ್
ನಿಮ್ಮ ಮೊಬೈಲ್ ನಂಬರ್
ಮತ್ತು ನಿಮ್ಮ ಬ್ಯಾಂಕ್ ಖಾತೆ ವಿವರಗಳು
ಮತ್ತು ನಿಮ್ಮ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವಿಕೆ ?
ಈ ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹೋಗುತ್ತೀರಿ
https://sevasindhugs1.karnataka.gov.in/
ಸ್ನೇಹಿತರೆ ಮೊದಲನೇದಾಗಿ ನೀವು ಸೇವಾ ಸಿಂಧು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಂದರೆ ಸೇವಾ ಸಿಂಧು ಪೋರ್ಟಲ್ ಗೆ.
ನಂತರ ನೀವು ಅಲ್ಲಿ ಕಾಣುವ ಗೃಹಲಕ್ಷ್ಮಿ ಯೋಜನೆ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಅರ್ಜಿ ಫಾರಂ ಸಿಗುತ್ತದೆ ಅಲ್ಲಿ ಕೇಳಿರುವ ಪ್ರತಿಯೊಂದು ಮಾಹಿತಿಗೆ ನೀವು ಡಾಕುಮೆಂಟ್ ಅನ್ನು ತುಂಬಬೇಕು .
ನಂತರ ಐ ಅಗ್ರೀ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇಷ್ಟಾದರೆ ನೀವು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಅಂತ ಒಂದು ವೇಳೆ ಅರ್ಜಿ ಲಿಂಕ್ ಓಪನ್ ಆಗದೆ ಇದ್ದರೆ ಇನ್ನು ಕೆಲ ದಿನಗಳವರೆಗೆ ನೀವು ಕಾಯಬೇಕಾಗುತ್ತದೆ .
ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆ ಅರ್ಜಿ ಸಂಪೂರ್ಣ ಬದಲಾವಣೆ ? ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್