ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೆ ನಿಮಗೆ ತಿಳಿದಿರಬಹುದು ಈಗಾಗಲೇ ಸಿಲಿಂಡರ್ ಡೀಸೆಲ್ ಪೆಟ್ರೋಲ್ ಟೊಮೊಟೊ ಹಾಗು ತರಕಾರಿಗಳ ಬೆಲೆ ಹಾಲು ಗ್ಯಾಸ್ ಮುಂತಾದವುಗಳ ಬೆಲೆಯೂ ಕೂಡ ಆಕಾಶ ಮುಟ್ಟಿದೆ.
ಅಷ್ಟೇ ಅಲ್ಲದೆ ಬಸ್ ಟಿಕೆಟ್ ದರ ಕೂಡ ಏರಿಕೆಯಾಗಿದೆ ಈ ವಿಚಾರ ಬಹಳ ಹರಿದಾಡುತ್ತಿದೆ ಇದಕ್ಕೆ ಜನರು ಬಹಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಕ್ತಿ ಯೋಜನೆ :
ಈಗ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರ ಸಬಲೀಕರಣ ಉದ್ದೇಶದಿಂದ ಮಹಿಳೆಯರಿಗಾಗಿಯೇ ಉಚಿತ ಬಸ್ ಯೋಜನೆಯನ್ನು ಅಂದರೆ ಶಕ್ತಿ ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನು ಓದಿ:-KSRTC: ಬಜೆಟ್ ಮಂಡನೆ ಬೆನ್ನಲ್ಲೇ KSRTC ಚಾಲಕರಿಗೆ ಮೊದಲ ಬಾರಿಗೆ ಆಘಾತ ? ಮಧ್ಯರಾತ್ರಿಂದ ಹೊಸ ರೂಲ್ಸ್?
ಶಕ್ತಿ ಯೋಜನೆಯಿಂದ ಪ್ರತಿ ಮಹಿಳೆಯರಿಗೂ ಉಚಿತವಾಗಿ ಯೋಜನೆ ದೊರೆಯುತ್ತದೆ ನಮ್ಮ ಕರ್ನಾಟಕದಲ್ಲಿ ಯಾವ ಜಿಲ್ಲೆಗೆ ಬೇಕಾದರೂ ಹೋಗಬಹುದು ಅಥವಾ ಎಲ್ಲಿ ಬೇಕಾದರೂ ತಿರುಗಬಹುದು ನಮ್ಮ ಕರ್ನಾಟಕದ ಒಳಗಡೆ ಮಹಿಳೆಯರೆಲ್ಲರೂ KSRTC, BMTC, nwrtc, kkrtc ಈ ಬಸ್ಗಳ ಮುಖಾಂತರ ಮಹಿಳೆಯರೆಲ್ಲರೂ ಉಚಿತವಾಗಿ ಪ್ರಯಾಣಿಸಬಹುದು ಎಂದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ .
ಇತ್ತೀಚಿಗೆ ಟಿಕೆಟ್ ದರ ಹೆಚ್ಚಳ ?
ಈಗ ಸದ್ಯ ಮಹಿಳೆಯರಿಗೆ ಉಚಿತ ಪ್ರಯಾಣ ಸರ್ಕಾರದವರು ಮಾಡಿದರು ಆದರೆ ಇದರ ನಡುವೆ ಟಿಕೆಟ್ ದರವನ್ನ ಹೆಚ್ಚು ಮಾಡುತ್ತಿದ್ದಾರೆ ಎಂದು ಸುದ್ದಿಗಳು ದೂರುಗಳು ಕೇಳಿ ಬರುತ್ತಿವೆ.
ಸಾರ್ವಜನಿಕರಿಗೆ ಯಾವುದೇ ತರಹದ ಮಾಹಿತಿ ನೀಡದೆ ನೇರವಾಗಿ ಬಸ್ ದರ ಹೆಚ್ಚು ಮಾಡಿದ್ದರಿಂದ ಸಾರ್ವಜನಿಕರು ಇದಕ್ಕೆ ಅಗ್ರೋಶವನ್ನ ವ್ಯಕ್ತಪಡಿಸಿದ್ದಾರೆ ಪ್ರಮುಖವಾಗಿ ನವಲಗುಂದ ,ಯಮನೂರು ಮಾರ್ಗದ ಮುಖಾಂತರ ಹೋಗುವ ಪ್ರಯಾಣಿಕರಿಗೆ ಟಿಕೆಟ್ ದರವನ್ನು ಹೆಚ್ಚಿಗೆ ಮಾಡಿದ್ದಾರೆ.
ಅಂದರೆ ಹೇಳಬೇಕೆಂದರೆ ಐದು ರೂಪಾಯಿ ದರ ಇದ್ದುದ್ದನ್ನ ಹತ್ತು ರೂಪಾಯಿ ಮಾಡಿದ್ದಾರೆ ಎಂದು ಸುದ್ದಿಗಳು ಕೇಳಿ ಬರುತ್ತಿವೆ.
ಪ್ರತಿಯೊಂದು ಕಡೆ ಏರಿಕೆಯಾಗುವ ಸಾಧ್ಯತೆ ಇದೆ ?
ಸ್ನೇಹಿತರೆ ಬಸ್ ದರ ಪ್ರತಿಯೊಂದು ಕಡೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಯಾಕೆಂದರೆ ಒಂದು ಕಡೆ ಮಹಿಳೆಯರಿಗೆ ಉಚಿತ ಪ್ರಯಾಣ ಅಂತ ನೀಡಿದರೆ ಇನ್ನೊಂದು ಕಡೆ ಪುರುಷರಿಗೆ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡಲು ಬಹಳ ಕಷ್ಟಕರವಾಗಿದೆ.
ಮಹಿಳೆಯರ ಸಂಖ್ಯೆ ಹೆಚ್ಚಿದ್ದರು ಕೂಡ ಬಸ್ಗಳು ಬಹಳ ರಷ್ ಇರುವುದರಿಂದ ಇದರ ಜೊತೆಯಲ್ಲಿ ಪುರುಷರು ಪ್ರಯಾಣಿಸಬೇಕೆಂದರೆ ಬಹಳ ಕಷ್ಟಕರವಾಗಿರುತ್ತದೆ ಇದರಿಂದಾಗಿ ಖಾಸ್ಗಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆಯಾಗಿದೆ.
ದಿನಕಳೆದಂತೆ ಮಹಿಳೆಯರ ಪ್ರಯಾಣ ಹೆಚ್ಚಾಗಿದೆ ?
ಸ್ನೇಹಿತರೆ ನಿಮಗೆ ತಿಳಿದಿರಬಹುದು ದಿನದಿಂದ ದಿನಕ್ಕೆ ಮಹಿಳೆಯರ ಓಡಾಟ ಪ್ರಯಾಣ ಬಾಳ ಹೆಚ್ಚುತ್ತಿದೆ ಈಗ ಸದ್ಯ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರೇ ಸದ್ದಾಗಿದೆ ಈಗ ಸದ್ಯ ನಮ್ಮ ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ನೂರಕ್ಕೆ ಶೇಕಡ 70ರಷ್ಟು ಮಹಿಳೆಯರೇ ತುಂಬಿಬಿಟ್ಟಿದ್ದಾರೆ.
ಫ್ರೀ ಬಸಂತ ಸರ್ಕಾರದವರು ಸ್ವಾಗತಿಸಿದರೆ ಇದ್ದ ಪುರುಷರಿಗೆ ಸಿಟ್ ಟೆನ್ಶನ್ ಎದುರಾಗಿದೆ ಆದರೆ ಇನ್ನು ಮುಂದೆ ಟಿಕೆಟ್ ದರವನ್ನ ಹೆಚ್ಚಿಗೆ ಮಾಡಿದರೆ ಜನಸಾಮಾನ್ಯರ ಪ್ರಯಾಣ ಕಷ್ಟಕರವಾಗಬಹುದು.