ಸ್ನೇಹಿತರೆ ರಾಜ್ಯ ಸರ್ಕಾರವು ಪ್ರತಿ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ ಗಳಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದೆ ಅಷ್ಟೇ ಅಲ್ಲದೆ ಇದರ ಬಗ್ಗೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಆದೇಶವನ್ನು ಕೂಡ ಹೊರಡಿಸಲಾಗಿದೆ.
ಅಷ್ಟೇ ಅಲ್ಲದೆ ಕಾಂಗ್ರೆಸ್ ಸರ್ಕಾರವು ಚುನಾವಣೆ ಸಮಯದಲ್ಲಿ ನೀಡಿರುವ ಐದು ಭರವಸೆಗಳನ್ನ ಜೂನ್ 1 2023 ಜಾರಿಗೆ ತರಲು ನಿರ್ಧರಿಸಿದೆ ಈ ಐದು ಭರವಸೆಗಳಲ್ಲಿ ಒಂದಾದ ಮಹಿಳೆಯರಿಗೆ ರಾಜದಾದ್ಯಂತ ಉಚಿತ ಬಸ್ ಪ್ರಯಾಣ ಈ ಯೋಜನೆಯು ಇಂದಿನಿಂದಲೇ ರಾಜ್ಯ ಸರ್ಕಾರ ಜಾರಿಗೆ ಮಾಡಿದೆ.
ಈ ಯೋಜನೆಯಿಂದ ಮಹಿಳೆಯರಿಗೆ ಬಹಳ ಅನುಕೂಲವಾಗಿದೆ ಮತ್ತು ಪ್ರಯಾಣಿಸಲು ಬಹಳ ಸುಲಭವಾಗಿದೆ ಆದರೆ ಇದರ ಬಗ್ಗೆ ಸರಕಾರವು ಕೆಲವು ನಿಯಮಗಳನ್ನು ತಿಳಿಸಿದ್ದು ರಾಜ್ಯ ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಮಹಿಳೆಯರು ಕೆಲವು ಬಸ್ಗಳಲ್ಲಿ ಉಚಿತ ಬಸ್ ಪ್ರಯಾಣ ಮಾಡಬಹುದು ಇನ್ನೂ ಕೆಲವೊಂದು ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡುವಂತಿಲ್ಲ.
ಮಹಿಳೆಯರಿಗೆ ಯಾವ ಯಾವ ಬಸ್ಸುಗಳಲ್ಲಿ ಉಚಿತ ಬಸ್ ಪ್ರಯಾಣವಿದೆ?
ಸ್ನೇಹಿತರೆ ರಾಜ್ಯ ಸರ್ಕಾರವು ಈಗ ತಾನೇ ಪ್ರತಿ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಎಂದು ಮಾಹಿತಿಯನ್ನು ಹೊರಡಿಸಿದ್ದು ಮಹಿಳೆಯರು ಇಂದಿನಿಂದ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು.
ಮಹಿಳೆಯರು ಯಾವುದೇ ಟಿಕೆಟ್ ಅನ್ನು ಪಡೆಯದೆ ನೀವು ಉಚಿತವಾಗಿ ಪ್ರಯಾಣಿಸಿ ಎಂದು ರಾಜ್ಯ ಸರ್ಕಾರ ತಿಳಿಸಿದೆ ಆದರೆ ರಾಜ್ಯ ಸರ್ಕಾರವು ಕೆಲವೊಂದು ನಿಯಮಗಳನ್ನು ಮಹಿಳೆಯರಿಗೆ ತಿಳಿಸಿದೆ.
ಹಾಗಾದ್ರೆ ಈ ನಿಯಮಗಳು ಯಾವುವು ಎಂದರೆ ಈ ನಿಯಮಗಳ ಪ್ರಕಾರವಾಗಿ ಹೇಳಬೇಕೆಂದರೆ ಮಹಿಳೆಯರು ಕೆಲವೊಂದು ಬಸ್ಸುಗಳನ್ನು ಬಿಟ್ಟು ಅಂದರೆ ಪ್ರೈವೇಟ್ ಬಸ್ಗಳನ್ನು ಬಿಟ್ಟು ಉಳಿದ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಬಹುದು ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ ಅಂದರೆ ಮಹಿಳೆಯರು ರಾಜಹಂಸ ಹಾಗೂ ಎಸಿ ಬಸ್ಗಳಲ್ಲಿ ಮತ್ತು ಐರಾವತ ಹಾಗೂ ಅಂಬಾರಿ ಮತ್ತು ಇನ್ನಿತರ ದುಬಾರಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವಂತಿಲ್ಲ ಎಂದು ರಾಜ್ಯ ಸರ್ಕಾರದವರು ಹೇಳಿದ್ದಾರೆ ಹಾಗೂ ಈ ಬಸವಗಳಲ್ಲಿ ಉಚಿತ ಪ್ರಯಾಣ ಇರುವುದಿಲ್ಲ ಒಂದು ವೇಳೆ ನೀವು ತಪ್ಪಿ ಹತ್ತಿದರೆ ಶುಲ್ಕವನ್ನು ತುಂಬಿಕೊಳ್ಳುತ್ತದೆ.
ಮಹಿಳೆಯರಿಗೆ ಕೆಲವು ರೀತಿಯ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಾಣ ಬೇಕೆಂದರೆ ಅವಕಾಶವಿರುವುದಿಲ್ಲ ಅವು ಯಾವುವೆಂದರೆ ಸುವರ್ಣ ಕರ್ನಾಟಕ ಸಾರಿಗೆ ಹಾಗೂ ಸರ್ಕಾರಿ ಬುಕಿಂಗ್ ಬಸ್ ಗಳು ಮತ್ತು ಅಂತರ್ ರಾಜ್ಯದ ಬಸ್ಸುಗಳು ಅಂದರೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳುವ ಬಸ್ ಗಳಿಗೆ ಅವಕಾಶ ಇರುವುದಿಲ್ಲ.
ಮಹಿಳೆಯರು ನಮ್ಮ ಕರ್ನಾಟಕ ರಾಜ್ಯದಲ್ಲಿ ಸಂಚರಿಸುವಂತಹ ಯಾವುದೇ ತರಹದ ಸರ್ಕಾರಿ ಬಸ್ಗಳಲ್ಲಿ ನೀವು ಉಚಿತವಾಗಿ ಪ್ರಯಾಣಿಸಬಹುದು.
ಹಾಗೆ ಕೂಡ ಬೆಂಗಳೂರಿನ ಬಿಎಂಟಿಸಿ ಬಸ್ಗಳ ಬಗ್ಗೆ ಹೇಳಬೇಕೆಂದರೆ ನೀವು ಬಿಎಂಟಿಸಿ ಬಸ್ಸುಗಳಲ್ಲಿ ಕೂಡ ಉಚಿತವಾಗಿ ಪ್ರಯಾಣಿಸಬಹುದು ಅದೇ ರೀತಿಯಾಗಿ ಜಿಲ್ಲೆ ತಾಲೂಕು ಹಳ್ಳಿ ಹಾಗೂ ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸುವಂತಹ ಸರ್ಕಾರಿ ಬಸ್ಸುಗಳಲ್ಲಿ ನೀವು ಉಚಿತವಾಗಿ ಪ್ರಯಾಣ ಮಾಡಬಹುದು ಆದರೆ ಅದರ ಹಾಗೆ ಇರುವ ನಗರಗಳಲ್ಲಿ ಎಸಿ ಬಸ್ ಹಾಗೂ ಎಸಿ ಸಿಟಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟ ಮಾಹಿತಿ ನೀಡಿದೆ.
ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಲು ಕಂಡಕ್ಟರ್ಗಳಿಗೆ ನೀಡಬೇಕಾಗಿರುವ ದಾಖಲೆಗಳು?.
ರಾಜ್ಯ ಸರ್ಕಾರ ಇವತ್ತಿನಿಂದ ಕರ್ನಾಟಕ ರಾಜ್ಯದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಘೋಷಿಸಿದ್ದಾರೆ.
ಆದರೆ ಅಷ್ಟೇ ಅಲ್ಲದೆ ಈ ಮೇಲೆ ತಿಳಿಸಿರುವ ಮಾಹಿತಿಗಳನ್ನು ಕೂಡ ನೀವು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಹಾಗೂ ಕೆಲವು ಬಸ್ಸುಗಳನ್ನು ನೀವು ಬಿಟ್ಟು ಬೇರೆ ಬಸ್ಸುಗಳನ್ನು ಉಚಿತವಾಗಿ ಪ್ರಯಾಣಿಸಬಹುದು ಇದನ್ನ ನೀವು ಬಹಳ ನೆನಪಿನಲ್ಲಿಟ್ಟುಕೊಳ್ಳಿ ನೀವು ಒಂದು ಸಲ ಗೊತ್ತಿಲ್ಲದ ಕೆಲವೊಂದು ಬಸ್ಗಳಲ್ಲಿ ಮಾತ್ರ ಹತ್ತಿದರೆ ನೀವು ಶುಲ್ಕವನ್ನು ಕಟ್ಟಬೇಕಾಗುತ್ತದೆ ಎಷ್ಟಿರುತ್ತದೆ ಅಷ್ಟು ಆದರೆ ಈಗ ಸರ್ಕಾರಿ ಬಸ್ಸುಗಳಲ್ಲಿ ನೀವು ಉಚಿತವಾಗಿ ಪ್ರಯಾಣಿಸಬಹುದು .
ಹಾಗಾದ್ರೆ ಉಚಿತವಾಗಿ ಪ್ರಯಾಣಿಸಲು ಮಹಿಳೆಯರು ಕಂಡಕ್ಟರ್ಗಳಿಗೆ ನೀವು ನಿಮ್ಮ ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಅಥವಾ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಇನ್ನಿತರ ಯಾವುದೇ ಒಂದು ನಾನು ಒಬ್ಬ ಕರ್ನಾಟಕದ ವ್ಯಕ್ತಿ ನಾನು ಕರ್ನಾಟಕದಲ್ಲಿ ವಾಸಿಸುವೆ ಎಂದು ಗುರುತಿನ ಚೀಟಿ ಇದ್ದರೆ ಸಾಕು ನೀವು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.