ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ನಮ್ಮ ಕರ್ನಾಟಕದಲ್ಲಿ ಈಗ ಸದ್ಯ 63 ಲಕ್ಷ ಮಹಿಳೆಯರಿಗೆ 2000 ಹಣವನ್ನು ಸರ್ಕಾರದವರು ಜಮಾ ಮಾಡಿದ್ದಾರೆ.
ಆದರೆ ಇನ್ನೂವರೆಗೂ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದರು ಕೂಡ ಅನೇಕ ಮಹಿಳೆಯರಿಗೆ 2,000 ಬಂದಿಲ್ಲ ಏಕೆ ಬಂದಿಲ್ಲ ಎಂಬುದರ ವಿವರವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಅಷ್ಟೇ ಅಲ್ಲದೆ ಸರ್ಕಾರ ಇನ್ನುವರೆಗೂ ಯಾರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲವೋ ಅವರಿಗೆ ನಾವು ನೇರವಾಗಿ 4,000 ಹಣ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನುವರೆಗೂ ಗೃಹಲಕ್ಷ್ಮಿ ಹಣ ಬರದೆ ಇದ್ದವರು ಈ ಚಿಕ್ಕ ಕೆಲಸ ಮಾಡಿ?
DBT
ಡಿ ಬಿ ಟಿ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ
ನಿಮಗೆ ಸರ್ಕಾರದಿಂದ ಬಂದಿರುವ ಹಣವನ್ನ ನೋಡಬೇಕೆಂದರೆ ಈ ಕೆಳಗಿನ ಆಪ್ ಅನ್ನ ಡೌನ್ಲೋಡ್ ಮಾಡಿಕೊಳ್ಳಿ ಇದು ಇಲಾಖೆಯ ಅಧಿಕೃತ ಆಪ್ ಆಗಿರುತ್ತದೆ.
ಮೊದಲನೇದಾಗಿ ಈ ಕೆಳಗಿನ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 👇
https://play.google.com/store/apps/details?id=com.dbtkarnataka
ಆಪ್ ಡೌನ್ಲೋಡ್ ಆದ ನಂತರ ನಿಮಗೆ ಇಲ್ಲಿ ಎಂಟರ್ ಆಧಾರ್ ನಂಬರ್ ಅಂತ ಇರುತ್ತೆ ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
ನಂತರ ಕೆಳಗಿರುವ ಬಾಕ್ಸ್ ಮೇಲೆ ಟಿಕ್ ಮಾಡಿ ಗೆಟ್ ಓಟಿಪಿ ಅಂತ ಕ್ಲಿಕ್ ಮಾಡಿ .
ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ತಪ್ಪದೇ ನಮೂದಿಸಿ ಇದಾದ ನಂತರ ವೇರಿಫೈ ಓಟಿಪಿ ಅಂತ ಕ್ಲಿಕ್ ಮಾಡಿ.
ಇಷ್ಟಾದ ನಂತರ ಇಲ್ಲಿ ನಿಮಗೆ ಪರ್ಸನಲ್ ಇನ್ಫರ್ಮೇಷನ್ ಕೇಳುತ್ತಾರೆ ಇಲ್ಲಿ ನಿಮ್ಮ ಹೆಸರು ಹಾಗೂ ನಿಮ್ಮ ಮನೆಯ ಅಡ್ರೆಸ್ ಮತ್ತು ನಿಮ್ಮ ಊರಿನ ಪಿನ್ ಕೋಡ್ ಮತ್ತು ಜೆಂಡರ್ ಗಂಡು ಅಥವಾ ಹೆಣ್ಣು ಹಾಗೂ ಹುಟ್ಟಿದ ದಿನಾಂಕ ಮತ್ತು ಮೊಬೈಲ್ ಸಂಖ್ಯೆ ಕೇಳುತ್ತಾರ.
ಇಷ್ಟದ ನಂತರ ನೀವು ಇಲ್ಲಿ ನಾಲ್ಕು ಸಂಖ್ಯೆಯ ಪಾಸ್ವರ್ಡ್ ಕ್ರಿಯೇಟ್ ಮಾಡಬೇಕಾಗುತ್ತದೆ ಕ್ರಿಯೇಟ್ ಮಾಡಿದ ನಂತರ ಇದನ್ನ ನೆನಪಿನಲ್ಲಿಟ್ಟುಕೊಂಡು ಸಬ್ಮಿಟ್ ಅಂತ ಕ್ಲಿಕ್ ಮಾಡಿ.
ನಿಮಗೆ ಇಲ್ಲೊಂದು ಹೋಂ ಪೇಜ್ ನಲ್ಲಿ ಪೇಮೆಂಟ್ ಸ್ಟೇಟಸ್ ಅಂತ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಇಲ್ಲಿ ನೀವು ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯದ ಸ್ಟೇಟಸ್ ಇನ್ನುವರೆಗೆ ಬಂದಿರುವ ಹಣದ ಮಾಹಿತಿಯನ್ನು ತಿಳಿದುಕೊಳ್ಳಬಹುದು ಇದರ ಪಕ್ಕದಲ್ಲಿ ಇರುವ ಸೀಡಿಂಗ್ ಸ್ಟೇಟಸ್ ಆಫ್ ಆಧಾರ್ ಇನ್ ಬ್ಯಾಂಕ್ ಅಕೌಂಟ್ ಅಂತ ಇರುತ್ತದೆ ಅಂದರೆ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದೆ ಎಂದು ತಿಳಿದುಕೊಳ್ಳಬಹುದು.
ಇದಾದ ನಂತರ ನಿಮಗೆ ಇಲ್ಲಿ ಸರ್ಕಾರದಿಂದ ಬಂದಿರುವ ಪ್ರತಿಯೊಂದು ಹಣದ ವರ್ಗಾವಣೆಯನ್ನು ತಿಳಿದುಕೊಳ್ಳಬಹುದು.
ಗೃಹಲಕ್ಷ್ಮಿ 2000 ಹಣ ಬದಲು ರೂ. 4000 ಹಣ! ಅಧಿಕೃತವಾಗಿ ಘೋಷಣೆ ಹೊರಡಿಸಿದ ಸರ್ಕಾರ