ಗೃಹಲಕ್ಷ್ಮಿ ಯೋಜನೆ: ಒಂದೇ ಕ್ಲಿಕ್ ಮುಖಾಂತರ ಅಧಿಕೃತ ವೆಬ್ಸೈಟ್ನೊಂದಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ? ಇಲ್ಲಿದೆ ಡೈರೆಕ್ಟ್ ಲಿಂಕ್ ?

ಎಲ್ಲರಿಗೂ ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಇದಕ್ಕೆ ಬೇಕಾಗಿರುವ ದಾಖತಿಗಳನ್ನು ಇದಕ್ಕೆ ಯಾರು ಅರ್ಹರು ಯಾರು ಅರ್ಹರಲ್ಲ ಎಂಬುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಳ್ಳಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.

ಗೃಹಲಕ್ಷ್ಮಿ ಯೋಜನೆ ಜುಲೈ 19 ಸಂಜೆ 5:30ಕ್ಕೆ ವಿಧಾನಸೌಧದ ಹಾಲಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಹಲವಾರು ಸಚಿವರು ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡುತ್ತಿದ್ದಾರೆ.

ಅರ್ಜಿ ಸಲ್ಲಿಸಿದವರಿಗೆ ಮತ್ತು ಇದಕ್ಕೆ ಫಲಾನುಭವಿಗಳು ಆಗಿದ್ದವರಿಗೆ ಆಗಸ್ಟ್ 16 ಅಥವಾ ಅಗಸ್ಟ್ 17ರಿಂದ ನೇರವಾಗಿ ಬ್ಯಾಂಕ್ ಖಾತೆಗೆ 2000ಹಣ ಬರುತ್ತದೆ.

ನಿಮಗೆ ತಿಳಿದಿರಬಹುದು ಕಾಂಗ್ರೆಸ್ ಸರ್ಕಾರದವರು ಚುನಾವಣೆ ಸಮಯದಲ್ಲಿ 5 ಭರವಸೆಗಳನ್ನು ನೀಡಿದ್ದರು ಮೊದಲು ನಾವು ಕರ್ನಾಟಕದಲ್ಲಿ ಗೆಲ್ಲಬೇಕು ಗೆದ್ದರೆ ಮಾತ್ರ ಈ ಐದು ಭರವಸೆಗಳನ್ನ ಅಂದರೆ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಹೇಳಿದ್ದರು.

ಈಗ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ತಿಂಗಳುಗಳ ಕಳೆದಿವೆ ಕೊಟ್ಟಿರುವ ಮಾತನ್ನು ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳಬೇಕು ಹಾಗಾಗಿ ಈ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ.

ಇದನ್ನು ಓದಿ:-ಗೃಹಲಕ್ಷ್ಮಿ ಅರ್ಜಿ ಕಾರ್ಯ ಪ್ರಾರಂಭ ? ನಿಮ್ಮ ಮೊಬೈಲ್ ಮೂಲಕವೇ ಒಂದೇ ಕ್ಲಿಕ್ ನಲ್ಲಿ ಅರ್ಜಿ ಸಲ್ಲಿಸಿ ?

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಗೊಂದಲ ಇದ್ದರೆ ಈ ಕೆಳಗಿನ ನಂಬರಿಗೆ ಎಸ್ಎಂಎಸ್ ಮಾಡಿ ಇಲ್ಲವೇ ಕರೆ ಮಾಡಿ:

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ನಿಮಗೆ ಗುರುಲಕ್ಷ್ಮಿಯ ಬಗ್ಗೆ ಪ್ರತಿಯೊಂದು ಪ್ರಶ್ನೆಗಳಿದ್ದಲ್ಲಿ ಕೆಳಗಿನ ನಂಬರ್ ಮೂಲಕ ನೀವು ಎಸ್ಎಂಎಸ್ ಮಾಡಬಹುದು ಇಲ್ಲದಿದ್ದರೆ ನೇರವಾಗಿ ಕರೆ ಮಾಡಿ ನಿಮ್ಮ ಗೊಂದಲವನ್ನು ಸರಿಪಡಿಸಿಕೊಳ್ಳಬಹುದು 👇

ಈ ಸಂಖ್ಯೆಗೆ ಕರೆ ಮಾಡಿ 1902

ಈ ಸಂಖ್ಯೆಗೆ ಎಸ್ಎಂಎಸ್ ಮಾಡಿ 8147500500

ಇಂತಹ ಜನಗಳಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಬರುವುದಿಲ್ಲ ?

ನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳು ಸರಕಾರಕ್ಕೆ ತೆರಿಗೆಯನ್ನು ಪಾವತಿ ಮಾಡುವಂತಿದ್ದರೆ

ಇಲ್ಲವೇ ನಿಮ್ಮ ಮನೆಯಲ್ಲಿ ಜಿಎಸ್‌ಟಿಯನ್ನು ಪಾವತಿ ಮಾಡುವಂತಿದ್ದರೆ

ಎಪಿಎಲ್, ಬಿಪಿಎಲ್ ಹೊಂದಿರದ ಕುಟುಂಬಗಳು

ನಿಮ್ಮ ಮನೆಯಲ್ಲಿ ಮಕ್ಕಳು ಸರಕಾರಿ ನೌಕರಿಗೆ ಹೋಗುವಂತಿದ್ದರೆ

ಇಲ್ಲವೇ ನಿಮ್ಮ ಮನೆಯಲ್ಲಿ ನಿಮ್ಮ ಗಂಡ ಆಗಲಿ ಅಥವಾ ನೀವೇ ಆಗಲಿ ಸರ್ಕಾರಿ ನೌಕರರಿಗೆ ಹೋಗೋದಿದ್ದರೆ ಈ ಯೋಜನೆ ನಿಮಗೆ ಸಿಗುವುದಿಲ್ಲ.

ಹಾಗಾದ್ರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?

ಬಿಪಿಎಲ್ ಎಪಿಎಲ್ ಅಥವಾ ಅಂಥೋದಯ ರೇಷನ್ ಕಾರ್ಡ್ ಗಳು ಇದ್ದ ಕುಟುಂಬಗಳು.

ಒಂದು ವೇಳೆ ನಿಮ್ಮ ಹತ್ತಿರ ಬಿಪಿಎಲ್ ಆಗಲಿ ಐಪಿಎಲ್ ಆಗಲಿ ಅಥವಾ ಅಂತ್ಯದ ಕಾರ್ಡ್ ಗಳು ಇಲ್ಲದಿದ್ದರೂ ಕೂಡ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ?

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಅಧಿಕೃತ ವೆಬ್ಸೈಟ್ ಆಗಿರುತ್ತದೆ 👇https://sevasindhuservices.karnataka.gov.in/

ನೀವು ಮೊದಲ ಬಾರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಂತಿದ್ದರೆ ಸೇವಾ ಸಿಂಧೂನಲ್ಲಿ ನೀವು ರಿಜಿಸ್ಟರ್ ಆಗಬೇಕಾಗುತ್ತದೆ ತಪ್ಪದೇ ರಿಜಿಸ್ಟರ್ ಆಗಿ.

ರಿಜಿಸ್ಟರ್ ಆಗಲು ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಹಾಕಿ.

ನಂತರ ಮೊಬೈಲ್ ಸಂಖ್ಯೆಗೆ ಪಾಸ್ವರ್ಡ್ ಅಥವಾ ಓಟಿಪಿ ಬರುತ್ತದೆ ಅದನ್ನು ಹಾಕಿ ಲಾಗಿನ್ ಆಗಿ.

ಇಷ್ಟ ಆದ ನಂತರ ಗೃಹಲಕ್ಷ್ಮಿ ಯೋಜನೆ ಎಂದು ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಇಷ್ಟದ ನಂತರ ಇಲ್ಲಿ ನೀವು ನಿಮ್ಮ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹೆಸರು ಹಾಗೂ ವಿಳಾಸವನ್ನ ತಪ್ಪದೇ ನಮೂದಿಸಿ ಮತ್ತೊಮ್ಮೆ ನಾವು ಸರಿಯಾಗಿ ಹಾಕಿದ್ದೆ ಅಥವಾ ಇಲ್ಲವೇ ಎಂಬುದನ್ನು ಗಮನಿಸಿ ನಂತರ ಅಪ್ಲೋಡ್ ಮಾಡಿ.

ಇಷ್ಟಾದ ನಂತರ ನೀವು ಲಾಗಿನ್ ಆದ ನಂತರ ಫ್ರೀ ಅಪ್ರೂವ್ಡ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಇದಾದ ನಂತರ ನಿಮ್ಮ ವಯಕ್ತಿಕ ವಿವರಗಳನ್ನು ಭರ್ತಿ ಮಾಡಿ ನಂತರ ನಿಮ್ಮ ಬ್ಯಾಂಕ್ ಖಾತೆ ತಪ್ಪದೆ ಹಾಕಿ ಇಷ್ಟಾದ ನಂತರ ಸಬ್ಮಿಟ್ ಅಂತ ಕ್ಲಿಕ್ ಮಾಡಿ.

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೆ ಮಹತ್ವವಾದ ಬದಲಾವಣೆ ! 200 ಪಡೆಯಲು ತಪ್ಪದೇ ಯಜಮಾನಿಯರು ಓದಿ ?

Leave a Comment