ಎಲ್ಲರಿಗೂ ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಅಧಿಕೃತ ಮಾಹಿತಿ ತಿಳಿಸಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಮೊದಲನೇದಾಗಿ ಹೇಳಬೇಕೆಂದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಈಗ ಸದ್ಯ ಈಗಿನ ದಿನಮಾನದಲ್ಲಿ ಅಂದರೆ ದಿನಾಂಕ 22 ಜುಲೈ 2023 ಈ ದಿನಾಂಕದಿಂದ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಮೊಬೈಲ್ ಮೂಲಕವೇ ಸಾಧ್ಯವಿಲ್ಲ ಅಂದರೆ ಈ ಮೊದಲು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಹಾಕಿದ ಹಾಗೆ ಈಗ ಗೃಹಲಕ್ಷ್ಮಿ ಯೋಜನೆಗೆ ಈ ರೀತಿಯಾಗಿ ಅರ್ಜಿ ಹಾಕುವ ಅವಶ್ಯಕತೆ ಕೂಡ ನಿಮಗೆ ಇರುವುದಿಲ್ಲ.

ಹಾಗಾದ್ರೆ ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಇದಕ್ಕೆ ಬೇಕಾಗಿರುವ ದಾಖಲಾತಿಗಳನ್ನು ಇದಕ್ಕೆ ಯಾರು ಅರ್ಹರು ಮತ್ತು ಯಾರು ಅನರ್ಹರು ಹೇಗೆ ಅರ್ಜಿ ಸಲ್ಲಿಸಬೇಕು ಅದು ಕೂಡ ಮೊಬೈಲ್ ನಲ್ಲಿಯೇ ಒಂದೇ ಕ್ಲಿಕ್ ಮುಖಾಂತರ ಗೃಹಲಕ್ಷ್ಮಿ ನಂಬರ್ ಡೈರೆಕ್ಟ್ ಆಗಿ ಪಡೆದುಕೊಂಡು ಯೋಜನೆಗೆ ಅರ್ಜಿ ಸಲ್ಲಿಸಿ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಎಪಿಎಲ್ ಬಿಪಿಎಲ್ ಅಥವಾ ರೇಷನ್ ಕಾರ್ಡ್ ನಿಮ್ಮ ಹತ್ತಿರ ಇರಬೇಕು.
ಒಂದು ವೇಳೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇಲ್ಲದಿದ್ದರೂ ಕೂಡ ಅರ್ಜಿ ಸಲ್ಲಿಸಬಹುದು.
ಅದು ಹೇಗೆ ಎಂದರೆ ಇನ್ನೂ ಈಗ ಸಾಧ್ಯವೇ ಗೃಹಲಕ್ಷ್ಮಿ ಅರ್ಜಿ ಕಾರ್ಯ ಪ್ರಾರಂಭವಾಗಿದೆ, ಇಷ್ಟರ ಒಳಗಡೆ ನೀವು ಮತ್ತೊಂದು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿ ಬಂದ ನಂತರವೇ ತಕ್ಷಣ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ.
ಹಾಗಾದ್ರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರಲ್ಲ ?
ಇದೇ ಬಗ್ಗೆ ಹೇಳಬೇಕೆಂದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರಲ್ಲ ಎಂದರೆ ನಿಮ್ಮ ಮನೆಯಲ್ಲಿ ನಿಮ್ಮ ಗಂಡ ಆಗಿರಬಹುದು ಅಥವಾ ನೀವೇ ಆಗಿರಬಹುದು ಸರ್ಕಾರಕ್ಕೆ ತೆರಿಗೆಯನ್ನು ಕಟ್ಟುವಂತಿದ್ದರೆ ಇಲ್ಲವೇ ಜಿಎಸ್‌ಟಿ ರಿಟರ್ನ್ ಅನ್ನ ಮಾಡುವಂತಿದ್ದರೆ.
ಅಷ್ಟೇ ಅಲ್ಲದೆ ನಿಮ್ಮ ಮಕ್ಕಳಾಗಿರಬಹುದು ಅಥವಾ ನಿಮ್ಮ ಗಂಡನಾಗಿರಬಹುದು ಅಥವಾ ನೀವೇ ಆಗಿರಬಹುದು ನಿಮ್ಮ ಮನೆಯಲ್ಲಿ ಸರ್ಕಾರಿ ನೌಕರಿಗೆ ಹೋಗುವಂತಿದ್ದರೆ ನಿಮಗೆ ಈ ಯೋಜನೆ ಸಿಗುವುದಿಲ್ಲ.
ಒಂದು ವೇಳೆ ಸರ್ಕಾರಿ ನೌಕರಿಗೆ ನಿಮ್ಮ ಗಂಡನಾಗಲಿ ಅಥವಾ ನೀವು ಆಗಲಿ ಹೋಗದೆ ಇದ್ದರೆ ಒಟ್ಟಾರೆಗೆ ನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳು ಸರ್ಕಾರಿ ನೌಕರರಿಗೆ ಹೋಗುವಂತಿದ್ದರೆ ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಹರು ಆಗಿರುವುದಿಲ್ಲ.
ಹಾಗಾದ್ರೆ ಮೊಬೈಲ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಡೈರೆಕ್ಟ್ ನಂಬರ್ ಮೂಲಕ ಒಂದೇ ಕ್ಲಿಕ್ ನಲ್ಲಿ ಹೇಗೆ ಅರ್ಜಿ ಸಲ್ಲಿಸುವುದು?
ಸ್ನೇಹಿತರೆ ನೀವು ಡೈರೆಕ್ಟ್ ಆಗಿ ಮೊಬೈಲ್ ಮೂಲಕವೇ ಅದು ಕೂಡ ಡೈರೆಕ್ಟ್ ನಂಬರೊಂದಿಗೆ ಒಂದೇ ಕ್ಲಿಕ್ನಲ್ಲಿ ಅರ್ಜಿ ಸಲ್ಲಿಸಬೇಕಾದರೆ ಮೊದಲು ದೂರವಾಣಿ ಸಂಖ್ಯೆಯನ್ನು ಪತ್ತೆ ಹಚ್ಚಿ ಈ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಯನ್ನು ಮಾಡಿಕೊಳ್ಳಿ ಇದು ಗೃಹಲಕ್ಷ್ಮಿ ಯೋಜನೆಯ ಸಂಖ್ಯೆ ಆಗಿರುತ್ತದೆ 👇
8147500500
ಈ ಮೇಲೆ ನೀಡಿರುವ ಸಂಖ್ಯೆ ಸೇವ್ ಮಾಡಿಕೊಳ್ಳಿ ಸೇವ್ ಮಾಡಿದ ನಂತರ ನಿಮ್ಮ ಮೊಬೈಲ್ ನಲ್ಲಿರುವ ಮೆಸೇಜ್ ಆಪ್ ಅನ್ನು ಓಪನ್ ಮಾಡಿ.
ನಂತರ ಅಲ್ಲಿ ನೀವು ಚಾಟ್ ಅಥವಾ ಸ್ಟಾರ್ ಚಾಟ್ ಇಲ್ಲವೇ ಸ್ಟಾರ್ಟ್ ಕನ್ವರ್ಜೇಷನ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
ಅದರ ಮೇಲೆ ಕ್ಲಿಕ್ ಮಾಡಿದ ನಂತರ To ಅಂತ ಇದ್ದಲ್ಲಿ ಇಲ್ಲಿ ಸರ್ಕಾರದ ನಂಬರ್ ಹಾಕಬೇಕು ಅಂದರೆ ಈ ಮೇಲೆ ಕೊಟ್ಟಿರುವ ನಂಬರನ್ನು ತಪ್ಪದೆ ನಮೂದಿಸಿ ನಂತರ ಟೆಕ್ಸ್ಟ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ತಪ್ಪದೆ ನಮೂದಿಸಿ ಒಂದು ಸಂಖ್ಯೆ ಕೊಡ ಮಿಸ್ ಆಗದೆ ಹಾಕಿ ನೆಮ್ಮದಿಸಿ ನಮೂದಿಸಿದ ನಂತರವೇ ನೀವು ಮೆಸೇಜನ್ನು ಸೆಂಡ್ ಮಾಡಿ.
ಸೆಂಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮಗೆ ಮೆಸೇಜ್ ಬರುತ್ತದೆ ನೀವು ಈ ದಿನದಂದು ಈ ಸಮಯದ ಒಳಗಡೆ ಈ ಸ್ಥಳಕ್ಕೆ ಬಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರದವರು ಅಧಿಕೃತವಾಗಿ ನಿಮಗೆ ಮೆಸೇಜ್ ಮಾಡುತ್ತಾರೆ.