ಕನ್ನಡ ನ್ಯೂಸ್ 360° ಓದುವರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಬದಲಾವಣೆ ಆಗಿರುವ ಮಾಹಿತಿಯ ಬಗ್ಗೆ ಸಂಪೂರ್ಣ ವಿವರಣೆಯನ್ನು ಈ ಲೇಖನದಲ್ಲಿ ನೀಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ .
ನೀವು ಕೂಡ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 2000 ಪಡೆದುಕೊಳ್ಳಬೇಕಾದರೆ ಈ ಬದಲಾವಣೆಗಳನ್ನು ನೀವು ತಿಳಿದುಕೊಳ್ಳಲೇಬೇಕು ಇಲ್ಲದಿದ್ದರೆ ನಿಮಗೂ 2000 ಹಣ ಬರುವುದು ಕಷ್ಟಕರವಾಗುತ್ತದೆ ಹೀಗಾಗಿ ಸಂಪೂರ್ಣ ವಿವರಣೆ ಈ ಲೇಖನದಲ್ಲಿದೆ ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ.
ಗೃಹಲಕ್ಷ್ಮಿ ಯೋಜನೆಯಲ್ಲಿ ಬಹು ದೊಡ್ಡ ಬದಲಾವಣೆ:
ಸ್ನೇಹಿತರೆ ನಿಮಗೆಲ್ಲ ತಿಳಿದಿರಬಹುದು ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ನೀಡಿತ್ತು.
ಈ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ.
ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವರು ಈ ತಪ್ಪು ಮಾಡಿದರೆ ಪ್ರತಿ ತಿಂಗಳು ಬರುವುದಿಲ್ಲ 2000 ಹಣ ?
ಇದರ ಕುರಿತಂತೆ ಗೃಹಲಕ್ಷ್ಮಿ ಯೋಜನೆಯಲ್ಲಿ ನಾವು ಕೆಲವು ಬದಲಾವಣೆಗಳನ್ನು ಮಾಡಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಈ ಕಾರಣದಿಂದಾಗಿ ಸ್ವಲ್ಪ ಕಾಲ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ವಿಳಂಬವಾಗುತ್ತದೆ ಎಂದು ಹೇಳಿದ್ದಾರೆ.
ನಾವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭಗೊಳಿಸುತ್ತೇವೆ ಎಂದು ಹೇಳಿದ್ದಾರೆ ಅಷ್ಟೇ ಇಲ್ಲದೆ ಆಗಸ್ಟ್ 17 ಅಥವಾ 18ನೇ ತಾರೀಕಿನಂದು ಮನೆ ಯಜಮಾನಿಯ ಖಾತೆಗೆ ನೇರವಾಗಿ 2000 ಹಣ ತಲುಪುತ್ತದೆ ಎಂದು ಹೇಳಿದ್ದಾರೆ.
ಹಾಗಾದ್ರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಆಗಿರುವಂತಹ ಬದಲಾವಣೆ ಏನು ?
ಸ್ನೇಹಿತರೆ ಈ ಬದಲಾವಣೆ ಮನೆಯ ಯಜಮಾನಿಯ ಖಾತೆಗೆ ನೇರವಾಗಿ 2000 ಹಣ ಬರಲು ಮಾಡಿದ್ದಾರೆ.
ಅದೇನೆಂದರೆ ನಮಗೂ ನಿಮಗೂ ಗೊತ್ತಿರುವಂತೆ ಕರ್ನಾಟಕವನ್ನು ಗ್ರಾಮವನ್ನು ಬೆಂಗಳೂರು ಒನ್ ಇಂತಹ ಕಡೆಗಳಲ್ಲಿ ನಾವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದವರು ಅವಕಾಶ ನೀಡಿದ್ದರು.
ಆದರೆ ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಗೃಹಲಕ್ಷ್ಮಿ ಯೋಜನೆಯನ್ನ ನೀವು ಗ್ರಾಮ ಪಂಚಾಯತಿಯಲ್ಲಿ ಅಥವಾ ಬಾಪೂಜಿ ಸೇವ ಕೇಂದ್ರಗಳಲ್ಲಿಯೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನಿಮಗೆ ನೀಡಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ನಮೂನೆಯಲ್ಲಿ ಏನೆಲ್ಲಾ ಭರ್ತಿ ಮಾಡಬೇಕು ?
ಸ್ನೇಹಿತರೆ ಮೊದಲು ಅರ್ಜಿ ನಮೂನೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಅರ್ಜಿದಾರ ಸಂಪೂರ್ಣ ವ್ಯಾಸವನ್ನು ಭರ್ತಿ ಮಾಡಬೇಕು ಅವು ಅಂದರೆ ಮನೆಯ ಯಜಮಾನಿಯ ಹೆಸರು ಮನೆಯ ವಿಳಾಸ ಆಧಾರ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ವೋಟರ್ ಐಡಿ ಅಂದರೆ ಗುರುತಿನ ಚೀಟಿ ನೀವು ಯಾವ ವರ್ಗದವರು ಹಾಗೂ ನಿಮ್ಮ ಬ್ಯಾಂಕ್ ವಿವರಗಳನ್ನು ಮಾಡಬೇಕು.
ಇಷ್ಟೆಲ್ಲ ನೀವು ತುಂಬಿದ ನಂತರ ಕೊನೆಯಲ್ಲಿ ಆ ಅಗ್ರಿ ಅಂತ ಕ್ಲಿಕ್ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಗೃಹಲಕ್ಷ್ಮಿ ಯೋಜನೆಯ ಡೈರೆಕ್ಟ್ ಲಿಂಕ್:👇
https://sevasindhugs.karnataka.gov.in/#
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:
ಸ್ನೇಹಿತರೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇಲ್ಲದಿದ್ದರೂ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇದು ಸರ್ಕಾರದ ಅಧಿಕೃತ ಆದೇಶವಾಗಿದೆ.
ಮೊದಲನೇದಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಸೇವಾ ಸಿಂಧು ಅಧಿಕೃತ ಆಗಿರುತ್ತದೆ 👇https://sevasindhuservices.karnataka.gov.in/
ಎರಡನೇದಾಗಿ ನೀವು ಸೇವಾ ಸಿಂಧು ಮೂಲಕವೇ ಅರ್ಜಿ ಸಲ್ಲಿಸುವಂತಿದ್ದರೆ ನೀವು ಅಕೌಂಟನ್ನ ಕ್ರಿಯೇಟ್ ಮಾಡಬೇಕಾಗುತ್ತದೆ ಇದಕ್ಕಾಗಿ ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ತಪ್ಪದೆ ಹಾಕಬೇಕು ಇದಾದ ನಂತರವೇ ನಿಮ್ಮ ಅಕೌಂಟ್ ಕ್ರಿಯೇಟ್ ಆಗುತ್ತದೆ.
ಇದಾದ ನಂತರ ನಿಮ್ಮ ಮೊಬೈಲ್ ಗೆ ಬಂದಿರುವ ಪಾಸ್ವರ್ಡ್ ಅಥವಾ ಓಟಿಪಿ ಮೂಲಕ ಲಾಗಿನ್ ಆಗಿ ನಂತರ ನೀವು ಗೃಹಲಕ್ಷ್ಮಿ ಯೋಜನೆ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.
ಇದಾದ ನಂತರ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಿಮ್ಮ ವಿಳಾಸ ಇಮೇಲ್ ಐಡಿ ನಿಮ್ಮ ಗುರುತಿನ ಚಿಟಿ ಮುಂತಾದ ಅಗತ್ಯ ದಾಖಲಾತಿಗಳನ್ನು ನೀವು ನಮೂದಿಸಬೇಕಾಗುತ್ತದೆ.