ಈಗಾಗಲೇ ಗೃಹಲಕ್ಷ್ಮಿಗೆ ಅನೇಕ ಮಹಿಳೆಯರು ಇದಕ್ಕೆ ಫಲಾನುಭವಿಗಳು ಆಗಿದ್ದಾರೆ ಅಷ್ಟೇ ಇಲ್ಲದೆ ಅನೇಕ ಮಹಿಳೆಯರಿಗೆ ಕೂಡ ಜಮಾ ಆಗಿದೆ ಆದರೆ ಇನ್ನೂ ಅನೇಕ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಇದರ ಗೊಂದಲದಲ್ಲಿ ಮಹಿಳೆಯರು ಇದ್ದಾರೆ.
ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಇದರ ಸ್ಪಷ್ಟ ಮಾಹಿತಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕಾರ ತಿಳಿಸಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹ ಲಕ್ಷ್ಮಿ ಬಗ್ಗೆ ನೀಡಿರುವ ಸ್ಪಷ್ಟ ಮಾಹಿತಿ?
ಸದ್ಯ ಈಗಾಗಲೇ ನಮ್ಮ ಇಲಾಖೆಯ ವತಿಯಿಂದ ಗೃಹಲಕ್ಷ್ಮಿಯ ಹಣ ಬಿಡುಗಡೆಯಾಗಿದೆ ಇಲಕೆಯಿಂದ ಬಿಡುಗಡೆಯಾದ ಹಣವು ಬ್ಯಾಂಕುಗಳಿಗೆ ವರ್ಗಾವಣೆ ಆಗಿದೆ ನಂತರ ಬ್ಯಾಂಕ್ ಸಿಬ್ಬಂದಿಗಳು ಯಾರು ಗೃಹಲಕ್ಷ್ಮಿ ಅಡಿಯಲ್ಲಿ ಫಲಾನುಭವಿಗಳು ಆಗಿದ್ದಾರೋ ಅವರ ಖಾತೆಗೆ ಹಣ ಜಮಾ ಮಾಡುತ್ತಾರೆ.
ಒಂದು ದಿನಕ್ಕೆ ಇಂತಿಷ್ಟು ಹಣವನ್ನು ಮಾತ್ರ ಜಮಾ ಮಾಡಬೇಕು ಎಂದು ನಿಯಮ ಇರುತ್ತದೆ ಹೀಗಾಗ ಪ್ರತಿ ಫಲಾನುಭವಿಗಳಿಗೂ ಒಂದೇ ದಿನದಲ್ಲಿ ನೀಡಲು ಆಗುವುದಿಲ್ಲ ಆದ್ದರಿಂದ ಕೆಲ ದಿನಗಳು ಅಂದರೆ ಎರಡರಿಂದ ಮೂರು ದಿನಗಳು ಮಾತ್ರ ಹಿಡಿಯುತ್ತದೆ ಅಷ್ಟೇ ಅಲ್ಲದೆ ಶನಿವಾರದ ಒಳಗಡೆ ಗುಣಲಕ್ಷ್ಮಿ ಹಣ ಜಮಾ ಆಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳಕರ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಈಗ ಸದ್ಯ 59 ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದೆ.
ಸದ್ಯ 8 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಹಾಕಿಲ್ಲ ?
ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಇದೊಂದು ದೊಡ್ಡ ಸಮಸ್ಯೆಯಾಗಿದೆ ಏಕೆಂದರೆ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರು ವರ್ಷಾನುಗಟ್ಟಲೆ ಅದನ್ನ ಹಾಗೆ ಬಿಟ್ಟಿರುತ್ತದೆ ಯಾವುದೇ ವಹಿವಾಟು ಇಲ್ಲದೆ ಮತ್ತು ಚುನಾವಣೆ ಇಲ್ಲದೆ ಅದನ್ನ ಹಾಗೆ ಬಿಟ್ಟಿರುವ ಕಾರಣದಿಂದ ಅದೇ ಅಕೌಂಟನ್ನ ಗೃಹಲಕ್ಷ್ಮಿ ಅಕೌಂಟ್ಗೆ ಕೊಟ್ಟಿರುತ್ತಾರೆ.
ಇಲ್ಲವೇ ಯಾವುದೇ ವೈವಾಟು ಮಾಡದೆ ಬಿಟ್ಟಿರುತ್ತಾರೆ, ಇದಕ್ಕಂತರೆ ನಾವು ಆಶಾ ಕಾರ್ಯಕರ್ತರಿಗೆ ಪಟ್ಟಿಯನ್ನು ನೀಡಿದ್ದೇವೆ.
ಯಾರು ಈ ಪಟ್ಟಿ ಒಳಗೆ ಬರುತ್ತಾರೋ ಆಶಾ ಕಾರ್ಯಕರ್ತೆಯರು ಈ ಮಾಹಿತಿಯನ್ನು ಅವರಿಗೆ ತಿಳಿಸುತ್ತಾರೆ ಇವರು ಮತ್ತೊಮ್ಮೆ ಖಾತೆಯನ್ನು ಸರಿ ಮಾಡಿಕೊಳ್ಳಬಹುದು ಮುಂಬರುವ ದಿನಮಾನಗಳಲ್ಲಿ 8 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತದೆ.