ಅಂತು ಇಂತು ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಈ ಯೋಜನೆಗೆ ನಮ್ಮ ಕರ್ನಾಟಕದ ಜನತೆಗೆ ತುದಿಕಾಲಿನಲ್ಲಿ ನಿಂತಿದ್ದಾರೆ.
ಈ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅವರು ಜುಲೈ 19 ಅಧಿಕೃತವಾಗಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ಕಳ್ಳರ ಹಾವಳಿ ಜಾಸ್ತಿಯಾಗಿದೆ ?
ಸ್ನೇಹಿತರೆ ಈಗಿನ ದಿನಮಾನಗಳಲ್ಲಿ ಪ್ರತಿಯೊಂದು ಸರಕಾರಿ ಯೋಜನೆಗಳಿಗೆ ನಾವು ಅರ್ಜಿ ಸಲ್ಲಿಸಬೇಕಾದರೆ ಆನ್ಲೈನ್ ಮೂಲಕವೇ ಅಡ್ಡಿಸಲಿಸಬೇಕಾಗುತ್ತದೆ ಇದರಲ್ಲಿ ಕೆಲವು ಆನ್ಲೈನ್ ಸರಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸುತ್ತೇವೆ ಎಂದು ನಮಗೆ ಮೋಸ ಮಾಡುತ್ತಾರೆ.
ಹೀಗಾಗಿ ಜನಸಾಮಾನ್ಯರು ಈ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು .
ನೀವು ಕೂಡ ಎಚ್ಚರಿಕೆಯಿಂದ ಇರಬೇಕು ಯಾವುದೇ ಮೋಸಕ್ಕೆ ಸಿಲುಕದೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 2000 ಹಣ ಪಡೆ ಬೇಕಾಗಿದ್ದಲ್ಲಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಇದನ್ನು ಓದು:- ಗೃಹಲಕ್ಷ್ಮಿ ಅರ್ಜಿ ಕಾರ್ಯ ಪ್ರಾರಂಭ ? ನಿಮ್ಮ ಮೊಬೈಲ್ ಮೂಲಕವೇ ಒಂದೇ ಕ್ಲಿಕ್ ನಲ್ಲಿ ಅರ್ಜಿ ಸಲ್ಲಿಸಿ ?
ಈ ಯೋಜನೆಗೆ ಅರ್ಜಿ ಫಾರಂ ಅನ್ನ ಇನ್ನುವರೆಗೂ ಸರ್ಕಾರದವರು ಬಿಡುಗಡೆ ಮಾಡಿಲ್ಲ ಆದರೆ ಚಾಲನೆಯನ್ನು ನೀಡಿದ್ದಾರೆ ನೀವು ಎಸ್ಎಂಎಸ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆನ್ಲೈನ್ ಮುಖಾಂತರ ಮೋಸ ಮಾಡುವವರಿಗೆ ನಾವು ಎಚ್ಚರಿಕೆಯನ್ನು ನೀಡುತ್ತೇವೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಹಾಗಾದ್ರೆ ಯಾವುದೇ ಮೋಸ ಆಗದೆ ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಸ್ನೇಹಿತರೆ ಮೊದಲನೇದಾಗಿ ಈ ಕೆಳಗಿನ ಹೇಳಿರುವ ನಂಬರನ್ನು ಸೇವ್ ಮಾಡಿಕೊಳ್ಳಿ ಇದು ಗೃಹಲಕ್ಷ್ಮಿ ನಂಬರ್ ಆಗಿರುತ್ತದೆ.
8147500500
ಹಾಗಾದ್ರೆ ಯಾವುದೇ ಮೋಸ ಆಗದೆ ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಮೊದಲನೇದಾಗಿ ನಿಮ್ಮ ಮೊಬೈಲ್ ನಲ್ಲಿರುವ ಮೆಸೇಜ್ ಆಪ್ ಓಪನ್ ಮಾಡಿ.
ಇಲ್ಲಿ ನಿಮಗೆ ಸ್ಟಾರ್ಟ್ ಕನ್ವರ್ಜೇಷನ್ ಇದರ ಮೇಲೆ ಕ್ಲಿಕ್ ಮಾಡಿ ಇಲ್ಲದಿದ್ದರೆ ಪ್ಲಸ್ ಐಕಾನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ.
To ಎಂಬ ಆಪ್ಷನ್ ಇರುತ್ತದೆ ಇದರಲ್ಲಿ ನೀವು ಗೃಹಲಕ್ಷ್ಮಿ ನಂಬರ್ ಹಾಕಬೇಕಾಗುತ್ತದೆ ನಂತರ text ಮೆಸೇಜ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ.
ಇದಾದ ನಂತರ ನಿಮಗೆ ಒಂದು ಸ್ವೀಕೃತ ಮೆಸೇಜ್ ಬರುತ್ತದೆ ಇದರಲ್ಲಿ ಯಾವ ದಿನಾಂಕದಂದು ಯಾವ ಸ್ಥಳಕ್ಕೆ ಯಾವ ಸಮಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ನಿಮಗೆ ನಿರ್ಧಿಷ್ಟವಾಗಿ ತಿಳಿಸುತ್ತಾರೆ ಆ ಸಮಯ ಆ ದಿನಾಂಕ ಒಳಗಡೆ ನೀವು ಹೋಗಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಮುಖ್ಯ ದಾಖಲಾತಿ?
ಬ್ಯಾಂಕ್ ಪಾಸ್ ಬುಕ್ ಹಾಗೂ ಮನೆಯ ಯಜಮಾನಿಯ ಆಧಾರ್ ಕಾರ್ಡ್ ಬೇಕಾಗುತ್ತದೆ ಮತ್ತು ಪತಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಮತ್ತು ಪಡಿತರ ಚೀಟಿ ಅಂದರೆ ರೇಷನ್ ಕಾರ್ಡ್
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರಲ್ಲ ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರೆಲ್ಲ ಅಂದರೆ ನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳು ಅಥವಾ ನೀವೇ ಸರ್ಕಾರ ಟ್ಯಾಕ್ಸ್ ಅನ್ನು ಕಟ್ಟುವಂತಿದ್ದರೆ ಇಲ್ಲವೇ ನಿಮ್ಮ ಮಕ್ಕಳಾಗಲಿ ನಿಮ್ಮ ಪತಿಯಾಗಲಿ ಅಥವಾ ನೀವೇ ಆಗಲಿ ಸರ್ಕಾರಕ್ಕೆ ಜಿಎಸ್ಟಿಯನ್ನು ಪಾವತಿ ಮಾಡುವಂತಿದ್ದರೆ ಇಲ್ಲದಿದ್ದರೆ ನಿಮ್ಮ ಮಕ್ಕಳು ನಿಮ್ಮ ಪತಿ ಅಥವಾ ನೀವೇ ಸರ್ಕಾರಿ ನೌಕರಿಗೆ ಹೋಗುವಂತಿದ್ದರೆ ಇಂಥವರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಹರು ಇರುವುದಿಲ್ಲ.