Breaking News: ಜಮೀನಿನಲ್ಲಿ ರಸ್ತೆ ನಿರ್ಮಿಸಲು ಸರ್ಕಾರದಿಂದ ಉಚಿತ ಹಣ! ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಜಾರಿ! ಅರ್ಜಿಸಲ್ಲಿಸುವುದು ಹೇಗೆ?

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ರೈತರು ತಮ್ಮ ಜಮೀನುಗಳಿಗೆ ಹೋಗಲು ಸರಿಯಾದ ದಾರಿ ವ್ಯವಸ್ಥೆ ಇಲ್ಲದೆ ಸಾಕಷ್ಟು ರೈತರು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಹಳ್ಳಿ ಗಳಲ್ಲಿ ರೈತ ತಮ್ಮ ಜಮೀನಿಗೆ ಹೋಗಬೇಕಾದರೆ ಇನ್ನೊಬ್ಬರ ಜಮೀನನ್ನು ದಾಟಿಕೊಂಡು ಹೋಗಬೇಕು. ಹೊಲಕ್ಕೆ ಹೋಗಲು ದಾರಿ ಇರುವುದಿಲ್ಲ. ಸಾಕಷ್ಟು ಬಾರಿ ಈ ರಸ್ತೆಯ ಕಾರಣಕ್ಕೆ ಜಗಳ ನಡೆದಿರುತ್ತವೆ. ಈ ಎಲ್ಲಾ ಕಾರಣಗಳಿಂದ ಸರ್ಕಾರ ರೈತರಿಗೆ ತಮ್ಮ ಜಮೀನಿಗೆ ಹೋಗಲು ದಾರಿ ಮಾಡಿಕೊಡುವುದ್ದಕ್ಕೆ ಮುಂದಾಗಿದೆ , ನೀವು ಕೂಡ ನಿಮ್ಮ ಜಮೀನಿನಲ್ಲಿ ಉಚಿತ ರಸ್ತೆ ಪಡೆಯಲು ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Our field is our road scheme

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಮ್ಮ ಹೊಲ ನಮ್ಮ ರಸ್ತೆ ಎನ್ನುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ, ಈ ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆದು ರೈತರು ರಸ್ತೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರಿಯಾದ ಅರ್ಜಿಯನ್ನು ಬರೆದು ನಿಮ್ಮ ಗ್ರಾಮ ಪಂಚಾಯಿತಿಗೆ ಕೊಟ್ಟರೆ ಅದನ್ನು ಪರಿಶೀಲಸಿ ನಿಮ್ಮ ಜಮೀನಿಗೆ ಹೋಗಲು ದಾರಿಯನ್ನು ಮಾಡಲಾಗುತ್ತದೆ.

ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಪಡೆಯುವುದು ಹೇಗೆ?

ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದಿದ್ದರೆ ನಿಮ್ಮ ಗ್ರಾಮ ಪಂಚಾಯಿತಿಗೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು. ನಿಮ್ಮ ಜಮೀನಿನ ಸರ್ವೆ ನಂಬರ್ ಜಮೀನಿನ ವಿಸ್ತೀರ್ಣ ಹಾಗೂ ಹೊಲಕ್ಕೆ ಸಂಬಂಧಪಟ್ಟ ಹಾಗೆ ಎಲ್ಲಾ ಮಾಹಿತಿಯನ್ನು ಅರ್ಜಿಯಲ್ಲಿ ತುಂಬಬೇಕು, ಬಳಿಕ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ನಿಮ್ಮ ಅರ್ಜಿಯ ಬಗ್ಗೆ ಚರ್ಚಿಸಿ ನಿಮ್ಮ ಅರ್ಜಿಗೆ ಅನುಮೋದನೆ ನೀಡಲಾಗುತ್ತದೆ. ‌ಗ್ರಾಮ ಪಂಚಾಯಿತಿಯು ಇದನ್ನು ವಾರ್ಷಿಕ ಕ್ರಿಯೆ ಯೋಜನೆಯಲ್ಲಿ ಸೇರಿಸುವ ಕೆಲಸ ಮಾಡುತ್ತದೆ . ಈ ಮೂಲಕ ನಿಮಗೆ ಅನುದಾನವನ್ನು ನೀಡುವ ಬಗ್ಗೆ ಕುಲಂಕೂಶವಾಗಿ ಚರ್ಚಿಸಲಾಗುತ್ತದೆ. ನಂತರ ಸಾಮಾನ್ಯ ಸಭೆಯಲ್ಲಿ ಎಷ್ಟು ಪ್ರಮಾಣದಲ್ಲಿ ಅನುದಾನವನ್ನು ನೀಡಬೇಕು ಎಂದು ಚರ್ಚಿಸಿ ಅಷ್ಟು ಹಣವನ್ನು ನೀಡಲಾಗುತ್ತದೆ.

ಈ ಯೋಜನೆಯಡಿ ರಸ್ತೆ ಕೆಲಸ ಮಾಡಿಸುವುದು ಹೇಗೆ?

ಗ್ರಾಮ ಪಂಚಾಯಿತಿಯ ಅನುಮೋದನೆ ಪಡೆದ ನಂತರ ಗ್ರಾಮ ಪಂಚಾಯಿತಿ ಇಂದ ಒಬ್ಬರು ನಿಮ್ಮ ಜಮೀನಿಗೆ ಬಂದು ಅಲ್ಲಿ ಅಲ್ಲಿ ನಿಮ್ಮ ಜಾಗದ ಅಳತೆ ಮಾಡಲಾಗುತ್ತದೆ ಹಾಗೂ ಎಷ್ಟು ಜನರು ಈ ಕೆಲಸ ಮಾಡಲು ಬೇಕಾಗುತ್ತದೆ ಇದಕ್ಕೆ ಆಗುವ ಖರ್ಚು ಎಷ್ಟಾಗುತ್ತೆ, ಎಂಬುದನ್ನು ಪಟ್ಟಿ ಮಾಡಿ ಅದರಂತೆ ಕೆಲಸ ನಡೆಸಲು ಸೂಚಿಸುತ್ತಾರೆ. ಈ ಯೋಜನೆಯಲ್ಲಿ ಕೆಲಸಮಾಡಲು ಗ್ರಾಮ ಪಂಚಾಯಿತಿ ಇಂದ ಜಾಬ್‌ ಕಾರ್ಡ್‌ ( ಉದ್ಯೋಗ ಖಾತರಿ) ಇರುವ ಕಾರ್ಮಿಕರನ್ನು ನೇಮಕ ಮಾಡಲಾಗುತ್ತದೆ. ಈ ರಸ್ತೆ ಕೆಲಸದಲ್ಲಿ ಯಾರೂ ನೇಮಕವಾಗುತ್ತಾರೋ ಅವರಿಗೆ ಪ್ರತಿವಾರ ಅವರ ಖಾತೆಗೆ ಹಣವನ್ನು ಹಾಕಲಾಗುತ್ತದೆ, ರಸ್ತೆ ಕಾಮಗಾರಿ ಮಾಡುವಾಗ ಬೇಕಾಗುವ ಕಲ್ಲು ಮಣ್ಣು ಮುಂತಾದ ವಸ್ತುಗಳನ್ನು ಲಾರಿಗಳ ಮೂಲಕ ತರಿಸಲಾಗುತ್ತದೆ.

ನಮ್ಮ ಹೊಲ ನಮ್ಮ ರಸ್ತೆ ಯೋಜನೆ ನಿಯಮಗಳು:

  • ಸಮುದಾಯ ರಸ್ತೆ ನಿರ್ಮಾಣ ಮಾಡಲು ಸುತ್ತಮುತ್ತಲಿನ ಎಲ್ಲಾ ರೈತರು ಒಪ್ಪಿಗೆಯನ್ನು ಸೂಚಿಸಬೇಕು
  • ರಸ್ತೆ ಕಾಮಗಾರಿ ನಡೆಸಲು ಶೇ. 60 ರಷ್ಟು ಹಾಗೂ ಯಂತ್ರಗಳ ಸಹಾಯದಿಂದ ಮತ್ತು ಶೇ. 40 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಈ ಕೆಲಸವನ್ನು ಮಾಡಲಾಗುತ್ತದೆ.
  • ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ಸಂಬಳವನ್ನು ನೀಡಲಾಗುತ್ತದೆ ಗಂಡು ಅಥವಾ ಹೆಣ್ಣು ಯಾರೇ ಕೆಲಸ ಮಾಡಿದರು ಅವರಿಗೆ ಒಂದೇ ರೀತಿಯ ಸಂಬಳ ನೀಡಲಾಗುತ್ತದೆ ಪ್ರಸ್ತುತ ಒಂದು ದಿನಕ್ಕೆ 316 ರೂ ಸಂಬಳವನ್ನು ನೀಡಲಾಗುತ್ತಿದೆ.
  • ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರುದ್ಯೋಗಿಗಳು ಈ ಕೆಲಸ ಬೇಕು ಎಂದರೆ ಕೆಲಸ ಸಿಗುತ್ತದೆ ಒಂದು ವೇಳೆ ಒಂದು ದಿನ ಕೆಲಸ ಇಲ್ಲದೆ ಮನೆಯಲ್ಲಿದ್ದರೆ ಅವರಿಗೆ ನಿರುದ್ಯೋಗ ಭತ್ಯೆ ಕೊಡಲಾಗುತ್ತದೆ.
  • ಉದ್ಯೋಗ ಖಾತ್ರಿ ಯೋಜನೆಯಲ್ಲಿ ಒಂದು ವರ್ಷದಲ್ಲಿ ಒಂದು ಕುಟುಂಬಕ್ಕೆ ನೂರು ದಿನಗಳವರೆಗೆ ಕಡ್ಡಾಯ ಕೆಲಸ ನೀಡಲಾಗುತ್ತದೆ.
  • ಈ ಯೋಜನೆಯ ಬಗ್ಗೆ ರೈತರಿಗೆ ಯಾವುದೆ ಗೊಂದಲಗಳಿದ್ದರೆ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿಯಾಗಿ ಸಲಹೆಯನ್ನು ಪಡೆದು ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಲ್ಲಿ ಹೊಲಕ್ಕೆ ಹೋಗುವ ರಸ್ತೆ ಮಾಡಿಸಿಕೊಳ್ಳಬಹುದಾಗಿದೆ.

ಇತರೆ ವಿಷಯಗಳು:

ಗೃಹಲಕ್ಷ್ಮಿ ಯೋಜನೆ: ಅಪ್ಪಿತಪ್ಪಿಯು ಈ ತಪ್ಪು ಮಾಡಬೇಡಿ, ಇಲ್ಲದಿದ್ದರೆ ಸಿಗುವುದಿಲ್ಲ 2000 ಹಣ..?

ಇಲ್ಲಿದೆ ನೋಡಿ ಗೃಹಲಕ್ಷ್ಮಿ ಯೋಜನೆ ಡೈರೆಕ್ಟ್ ನಂಬರ್ ! ಒಂದೇ ಕ್ಲಿಕ್ ನಲ್ಲಿ ಇಲ್ಲಿಂದ ಅರ್ಜಿ ಸಲ್ಲಿಸಿ

Leave a Comment