ಹಾಯ್ ಫ್ರೆಂಡ್ಸ್ ಇಂದಿನ ಈ ಲೇಖನದಲ್ಲಿ ಕರ್ನಾಟಕ ದ ಉಚಿತ ಬಸ್ ಪ್ರಯಾಣದ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಕೊಡಲಿದ್ದೇನೆ .
ಸಿದ್ದರಾಮಯ್ಯ ಅವರು 5 ಗ್ಯಾರಂಟಿಗಳನ್ನು ಘೋಷಣೆ ಮಾಡುವಷ್ಟರಲ್ಲಿ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಅಡಿಯಲ್ಲಿ ಶಕ್ತಿ ಯೋಜನೆಯನ್ನು ಜಾರಿಗೆ ಮಾಡಿದ್ದಾರೆ.
ಕರ್ನಾಟಕ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಯೋಜನೆಯನ್ನು ಈಡೇರಿಸಲು ಶಕ್ತಿ ಸ್ಮಾರ್ಟ್ ಯೋಜನೆ ಕಾಡಣ್ಣ ಜಾರಿಗೆ ಮಾಡಿದ್ದಾರೆ ಇದನ್ನ ಕಡ್ಡಾಯವಾಗಿ ಮಹಿಳೆಯರು ಬಳಸಲೇಬೇಕು ನೀವು ಕೂಡ ಉಚಿತವಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕಾಗಿದ್ದಲ್ಲಿ ನಮ್ಮ ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ .
ನೀವು ಈ ಲೇಖನವನ್ನ ಸಂಪೂರ್ಣವಾಗಿ ಓದಿದ ನಂತರವೇ ಹೇಗೆ ಅರ್ಜಿ ಸಲ್ಲಿಸಬೇಕು ಯಾವಾಗ ಶಕ್ತಿ ಸ್ಮಾರ್ಟ್ ಕಾರ್ಡ್ ಬರುತ್ತದೆ ಎಂಬುದನ್ನ ನಿಮಗೆ ತಿಳಿಯುತ್ತದೆ ಇದು ಕೂಡ ಮೊಬೈಲ್ ಮೂಲಕವೇ.
ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಸಿಎಂ ಸಿದ್ದರಾಮಯ್ಯ ನೀಡಿರುವ 5 ಗ್ಯಾರಂಟಿಗಳಲ್ಲಿ ಇದು ಕೂಡ ಒಂದಾಗಿತ್ತು. ಈಗ ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿ ಬಹಳ ದಿನಗಳಾಗಿವೆ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಮೇಲೆ ನೀಡಿರುವ ಐದು ಭರವಸೆಗಳಲ್ಲಿ ಒಂದಾದ ಉಚಿತ ಬಸ್ ಯೋಜನೆ ಇದನ್ನು ಜೂನ್ 11ರಿಂದ ಶಕ್ತಿ ಯೋಜನೆ ಅಡಿಯಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಹಾಗಾದ್ರೆ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಯಾರು ಅರ್ಹರು ?
ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ನಮ್ಮ ಕರ್ನಾಟಕದ ಹೆಣ್ಣು ಮಕ್ಕಳು ಹಾಗೂ ವಿದ್ಯಾರ್ಥಿಗಳು ಸಣ್ಣ ಮಕ್ಕಳು ಹಾಗೂ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಮತ್ತು ಮನೆಯಲ್ಲಿರುವ ತಾಯಂದಿರು ಹಾಗೂ ಗೃಹಿಣಿಯರು ಇವರೆಲ್ಲರೂ ಅರ್ಹರಾಗಿರುತ್ತಾರೆ ಅಷ್ಟೇ ಅಲ್ಲದೆ ಮನೆಯಲ್ಲಿರುವ ಪ್ರತಿ ಹೆಣ್ಣು ಮಕ್ಕಳಿಗೂ ಇದು ಅನ್ವಯವಾಗುತ್ತದೆ.
ಈ ಯೋಜನೆಗೆ ಟ್ರಾನ್ಸ್ಜೆಂಡರ್ ಸಮುದಾಯದವರು ಕೂಡ ಅರ್ಹರಾಗಿರುತ್ತಾರೆ ಹಾಗೂ ಇವರು ಕೂಡ ಈ ಯೋಜನೆಯನ್ನು ಉಚಿತವಾಗಿ ಪಡೆಯಬಹುದು.
ಇನ್ನು ಮುಂದೆ ಕರ್ನಾಟಕದ ಪ್ರತಿ ಮಹಿಳೆಯರಿಗೂ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ?
ಸ್ನೇಹಿತರೆ ಮುಂಬರುವ ಮೂರು ತಿಂಗಳುಗಳಲ್ಲಿ ಮಹಿಳೆಯರು ಈ ವೆಬ್ಸೈಟ್ ಮೂಲಕ 👇Sevesindu.karnataka.gov.in ಅರ್ಜಿಯನ್ನು ಸಲ್ಲಿಸಬಹುದು ಇದು ಆನ್ಲೈನ್ ಮುಖಾಂತರ ಆಗಿರುತ್ತದೆ.
ಆದರೆ ಇನ್ನೂವರೆಗೂ ಕರ್ನಾಟಕ ಸರ್ಕಾರ ಶಕ್ತಿ ಸ್ಮಾರ್ಟ್ ಕಾರ್ಡ್ಗಳನ್ನು ಯಾವಾಗಿನಿಂದ ವಿತರಿಸುತ್ತಾರೆ ಎಂದು ಇನ್ನುವರೆಗೂ ಅಧಿಕೃತವಾದ ಮಾಹಿತಿ ಬಂದಿಲ್ಲ.
ಈ ಕಾಡುಗಳಲ್ಲಿ ಹೆಚ್ಚಾಗಿ ನಮ್ಮ ಕೇಂದ್ರ ಸರ್ಕಾರದ ಗುರುತಿರಬಹುದು ಅಥವಾ ರಾಜ್ಯ ಸರ್ಕಾರದ ಗುರುತು ಇರಬಹುದು ಮತ್ತು ಅದರ ಮೇಲೆ ಮಹಿಳೆಯರ ವಸತಿ ಮತ್ತು ವಿಳಾಸ ಮತ್ತು ಅವರ ಫೋಟೋ ಕೂಡ ಇರಬಹುದು ಇನ್ನು ಅಧಿಕೃತ ಮಾಹಿತಿ ಜೂನ್ 11ರಿಂದ ಹಳ ಬೀಳಲಿದೆ .
ಜೂನ್ 11ರಿಂದ ಉಚಿತವಾಗಿ ಮಹಿಳೆಯರಿ ಗಂತಲೇ ಬಸ್ ಗಳು ಪ್ರಾರಂಭವಾಗುತ್ತವೆ ಆಗ ನೀವು ಕಂಡಕ್ಟರ್ಗಳಿಗೆ ಆಧಾರ್ ಕಾರ್ಡನ್ನು ತೋರಿಸಬಹುದು.
ಮಹಿಳೆಯರು ಉಚಿತ ಬಸ್ ಪ್ರಯಾಣವನ್ನು ಹೇಗೆ ಪಡೆಯಬಹುದು ?
ನೋಡಿ ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಆಗುವ ತನಕ ನೀವು ಜೂನ್ 11ರಿಂದ ನಿಮ್ಮ ಹತ್ತಿರ ಇರುವ ಆಧಾರ್ ಕಾರ್ಡ್ ನಿಮ್ಮ ಎರಡು ಫೋಟೋ ಮತ್ತು ನಿಮ್ಮ ವಿಳಾಸ ಇವೆಲ್ಲಗಳನ್ನ ನೀವು ಬಸ್ ಕಂಡಕ್ಟರ್ ಗಳಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಅಡಿಯಲ್ಲಿ ನೀಡಬೇಕು ಈ ಆದೇಶವನ್ನು ಸರ್ಕಾರದವರು ಹೊರಡಿಸಿದ್ದಾರೆ
ನೆನಪಿರಲಿ ನಮ್ಮ ರಾಜ್ಯದ ಹೊರಗಡೆ ಚಲಿಸುವಂತಹ ಹಾಗೂ ನಮ್ಮ ರಾಜ್ಯದಲ್ಲಿ ದೂರ ದೂರ ಊರುಗಳಿಗೆ ಚಲಿಸುವಂತಹ ಐಷಾರಾಮಿ ಬಸ್ಸುಗಳಿಗೆ ಯಾರು ಕೂಡ ಹತ್ತಬಾರದು ಇದು ಉಚಿತ ಯೋಜನೆ ಅಡಿಯಲ್ಲಿ ಬರುವುದಿಲ್ಲ ಹಾಗಾಗಿ ನೀವು ಎಚ್ಚರಿಕೆಯಿಂದ ಬಸ್ಸುಗಳನ್ನು ಹತ್ತಿ ಹಾಗಾದರೆ ನೀವು ಯಾವ ಯಾವ ಬಸ್ಸುಗಳನ್ನು ಹತ್ತಬಾರದು ಎಂದರೆ ರಾಜಹಂಸ ,ಅಂಬಾರಿ, ಇಂತಹ ಬಸ್ಸುಗಳನ್ನ ನೀವು ಹತ್ತಬಾರದು ಒಂದು ವೇಳೆ ಹತ್ತಿದರೆ ಬಸ್ ಟಿಕೆಟ್ ಗಳನ್ನು ತೆಗೆದುಕೊಳ್ಳಬೇಕು.